Friday, December 7, 2007

ಅದ್ಭುತ ಸುದ್ದಿ!!

ಇವತ್ತು ಪ್ರಜಾವಾಣಿಯಲ್ಲಿ ಅದ್ಭುತ ಸುದ್ದಿ ಓದಿದೆ. ಏನೆಂದರೆ ' ಟೀಮ್ ಇಂಡಿಯಾಕ್ಕೆ ಅಡ್ಡ ಬಂದ ಕೊಂಬೆ'!! ವಿಷಯವೇನೆಂದರೆ ಇಂದು ಬೆಂಗಳೂರಿನಲ್ಲಿ ನಡೆಯುವ ಪಾಕಿಸ್ತಾನ-ಭಾರತ 3 ನೇ ಟೆಸ್ಟ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ತಂಡದ ಎಲ್ಲಾ ಆಟಗಾರರನ್ನು ಬನಶಂಕರಿಯಲ್ಲಿರುವ ತನ್ನ ಮನೆಗೆ ಆಹ್ವಾನಿಸಿದ್ದರು. ಹಾಗೆ ಬಸ್ಸಲ್ಲಿ ಹೋಗಿದ್ರಂತೆ. ಮಧ್ಯದಲ್ಲಿ ಯಾವುದೋ ಮರದ ಕೊಂಬೆಯೊಂದು ಅಡ್ಡ ಸಿಕ್ಕಿ, ಬಸ್ಸಿನ ಚಾಲಕ ಬಸ್ಸು ನಿಲ್ಲಿಸಿದ್ದ ಎಂದೂ ಪ್ರಕಟಿಸಿದ್ದರು. ನಂಗನಿಸೋದು 'ಮರದ ಕೊಂಬೆ ಅಡ್ಡಸಿಕ್ರೆ ಚಾಲಕ ಬಸ್ಸು ನಿಲ್ಲಿಸದೆ, ನಮಗೇನು ಬಸ್ಸು ನಿಲ್ಲಿಸೋಕೆ ಆಗುತ್ತಾ ಅಥವಾ ಕೊಂಬೆ ಸಿಕ್ರೆ ಬಸ್ಸು ಸರಾಗವಾಗಿ ಹೋಗಲು ಆಗುತ್ತಾ? ಇದೇನು ಮೂರ್ಖತನದ ಪ್ರಶ್ನೆ ಕೇಳ್ತೀನಿ ಅಂದುಕ್ಕೊಳ್ಳಬೇಡಿ. ನಿಜವಾಗ್ಲೂ ಇದೂ ಸುದ್ದಿಯೇ? ಟೀಮ್ ಇಂಡಿಯಾ ಅನ್ನೋ ಕಾರಣ ಪ್ರಕಟಿಸಿದ್ದಾರೆ ವಿನಹಃ ಬೇರೇ ಯಾವುದೇ ಉದ್ದೇಶದಿಂದ ಅಲ್ಲ ಬಿಡಿ. ಹೌದು! ಗುರು ಸಿನಿಮಾದ ಶೂಟಿಂಗ್ ಸಮಯದಲ್ಲಿ ಐಶ್ವರ್ಯ ಸೈಕಲ್ಲಿಂದ ಬಿದ್ದಿದ್ದನ್ನು ಎಲ್ಲಾ ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟ ಮಾಡಿದ್ದವು. ಅವಳು ಬಿದ್ದಿದ್ದು, ಎದ್ದಿದ್ದು, ಅಭಿಷೇಕ್ ಕೈಹಿಡಿದು ನಿಲ್ಲಿಸಿದ್ದು, ಟ್ರೀಟ್ಮೆಂಟ್ ಮಾಡಿದ್ದು ಎಲ್ಲವನ್ನೂ ಪ್ರಕಟಿಸಿದ್ರು. ಇಂದು ನಮ್ಮ ಪತ್ರಿಕೆಗಳು ರಾಜಕೀಯ ಅಥವ ಕೊಂಬೆ ಅಡ್ಡ ಸಿಕ್ಕಂತಹ ಸಿಲ್ಲಿ ವಿಷಯಗಳನ್ನು ಪ್ರಕಟ ಮಾಡ್ತವೆ. ಆದ್ರೆ ಈ ಹಿಂದೆ ನಾನು ಹೇಳಿದಂತೆ 'ನಂದಿಗ್ರಾಮ'ದಂತಹ ಘೋರ ದುರಂತಗಳು ಸುದ್ದಿಯಾವುದಿಲ್ಲ ಬಿಡಿ.

6 comments:

jomon varghese said...

ಪತ್ರಿಕೆಯ ಒಳ್ಳೆಯ ಓದುಗರು ನೀವು. ವಿಚಿತ್ರವೆಂದರೆ ಇದೇ ಸುದ್ದಿಯನ್ನು ಕನ್ನಡ ಪ್ರಮುಖ ವಾಹಿನಿಯೊಂದು ಅಂದು ಲೈವ್ ತೋರಿಸಿತ್ತು!ಗಾಡಿಗೆ ಢಿಕ್ಕಿ ಹೊಡೆದ ಕೊಂಬೆಯನ್ನು ವೃತ್ತದಲ್ಲಿ ತೋರಿಸಿ, ಅದೇನು ಬೂದಿವೃಕ್ಷವೋ ಎನ್ನುವ ರೀತಿಯಲ್ಲಿ ಬಿಂಬಿಸಿತ್ತು. Oh god,ಮಾಧ್ಯಮಗಳದ್ದು ಅದೆಂತ ಸುದ್ದಿ ನಾಸಿಕ ಅಂತೀರಾ?

ಧನ್ಯವಾದಗಳು
ಜೋಮನ್

jomon varghese said...

ಪತ್ರಿಕೆಯ ಒಳ್ಳೆಯ ಓದುಗರು ನೀವು. ವಿಚಿತ್ರವೆಂದರೆ ಇದೇ ಸುದ್ದಿಯನ್ನು ಕನ್ನಡ ಪ್ರಮುಖ ವಾಹಿನಿಯೊಂದು ಅಂದು ಲೈವ್ ತೋರಿಸಿತ್ತು!ಗಾಡಿಗೆ ಢಿಕ್ಕಿ ಹೊಡೆದ ಕೊಂಬೆಯನ್ನು ವೃತ್ತದಲ್ಲಿ ತೋರಿಸಿ, ಅದೇನು ಬೂದಿವೃಕ್ಷವೋ ಎನ್ನುವ ರೀತಿಯಲ್ಲಿ ಬಿಂಬಿಸಿತ್ತು. Oh god,ಮಾಧ್ಯಮಗಳದ್ದು ಅದೆಂತ ಸುದ್ದಿ ನಾಸಿಕ ಅಂತೀರಾ?

ಧನ್ಯವಾದಗಳು
ಜೋಮನ್

Archana said...

ಧನ್ಯವಾದಗಳು

Tina said...

ಅರ್ಚನಾ,
ಆಗಾಗ ಬ್ಲಾಗ್ ಅಪ್ ಡೇಟ್ ಮಾಡುತ್ತ ಇರಿ. ವಾರಕ್ಕೊಮ್ಮೆಯಾದರೂ. ಚೆನ್ನಾಗಿ ಬರೆಯುತ್ತಿದೀರಿ. ನಿಂತುಬಿಡಬೇಡಿ.
ಕಾಳಜಿಯೊಡನೆ,
ಟೀನಾ.

ravikumar.a said...

suddi ennuvudu evattu bahutheka vanijyikaranagodide.
madyamagalu spardeyalii uliyabekadare "kshullaka suuddiyayannu pramuka suddiyenthalu ; pramuka suddiyannu kshulluka suddiyenthallu bimbisutthave " aadare
manaveeyathe mareyagutthiruvudu nammellara durantha.
innthi nimma
danyavaadagalu ravikumar.a

Swamy said...

You are correct. THe media should try to give more importance to news related to Social Causes.
Keep blogging
good luck
cheers
swamy