Friday, September 28, 2007

ಕನ್ನಡ ನಿಯತಕಾಲಿಕಗಳ ಭವಿಷ್ಯ...?

ಮತ್ತೆ ಅದೇ ಹಳಸಿದ ಹಪ್ಪಳ, ದೋಸೆ, ಗೊಜ್ಜು ತಿಂದು ರೋಸಿ ಹೋಗಿದ್ದರೆ ಇಲ್ಲಿಗೊಮ್ಮೆ ಬನ್ನಿ. ಹೊಸತೊಂದು ಪಾಕವನ್ನು ಜೊತೆಯಲ್ಲಿ ಕೂತು ಸವಿಯೋಣ.

ನಿಮಗೇ ಗೊತ್ತಿರುವಂತೆ ಇತ್ತೀಚೆಗೆ ಕೌಟುಂಬಿಕ ಪತ್ರಿಕೆಗಳೇ ಕನ್ನಡದಲ್ಲಿ ಹೇರಳವಾಗಿ ಹೊರಬರುತ್ತಿವೆ. ಅಲ್ಲಿ ಗಂಭೀರ ಚರ್ಚೆಯ ಬದಲು ಫ್ಯಾಷನ್, ಹುಟ್ಟುಹಬ್ಬ, ಧಾರಾವಾಹಿ ಇಂತಹ ವಿಷಯಗಳಿಗೆ ಒತ್ತು ಜಾಸ್ತಿ. ಪ್ರಸ್ತುತ ವಿದ್ಯಮಾನಗಳನ್ನು ವಿಷದವಾಗಿ ತಿಳಿಸುವ 'ನ್ಯೂಸ್ ಮ್ಯಾಗಜೀನ್' ಕನ್ನಡದಲ್ಲಿ ಇಲ್ಲವೇ ಇಲ್ಲ.

ಆದರೆ ಈ ಕೊರತೆ ನೀಗಿಸಲೋ ಎಂಬಂತೆ ಕನ್ನಡದಲ್ಲಿ ಆಂಗ್ಲ ನಾಮಧೇಯ ಹೊತ್ತ 'ದ ಸಂಡೆ ಇಂಡಿಯನ್' ಎಂಬ ವಾರ ಪತ್ರಿಕೆ ಈಗ ಹೊರಬರುತ್ತಿದೆ. ಇಂಗ್ಲಿಷ್ ಮಸಾಲೆಗಳೇ ತುಂಬಿಕೊಂಡಿರುವ ವಾರ ಪತ್ರಿಕೆ ಎಂಬ ಎಣಿಕೆ ನನ್ನಲ್ಲಿತ್ತು. ಒಂದು ಬಾರಿ ಓದಿದಾಗಲೇ ಆ ಎಣಿಕೆ ತಪ್ಪು ಎಂಬುದು ತಿಳಿಯಿತು. ಕನ್ನಡ ಪತ್ರಿಕೆಗಳಿಗೆ ಹೊಸ ಸ್ಪರ್ಧೆ, ಹೊಸ ನೆಲಗಟ್ಟು ಸಿಗಬಹುದೇನೋ ಎಂಬ ಆಶಯ ಗರಿಗೆದರಿತು. ಸರಿ, ಕನ್ನಡ ನಿಯತ ಕಾಲಿಕಗಳ ಕುರಿತು ಚರ್ಚಿಸಲು ಒಂದು ವೇದಿಕೆ ಯಾಕೆ ಆರಂಭಿಸಬಾರದು ಎಂಬ ಪ್ರಶ್ನೆ ತಕ್ಷಣ ಮನದಲ್ಲಿ ಬಂತು. ಅದರ ಫಲವೇ ಈ ಬ್ಲಾಗ್. ನನ್ನ ಜತೆ ಸೇರಿ ಚರ್ಚಿಸಲು ಇಷ್ಟ ಪಡುವವರಿಗೆ ಈ ತಾಣಕ್ಕೆ ಸ್ವಾಗತ.

8 comments:

Unknown said...

ಕನ್ನಡದ ಮಟ್ಟಿಗೆ ಈವರೆಗೆ ಇದ್ದ ನಿಯತಕಾಲಿಕಗಳೆಲ್ಲ ಬಹುತೇಕ ಮಹಿಳೆಯರನ್ನೇ ದೃಷ್ಟಿಯಲ್ಲಿಟ್ಟುಕೊಂಡಂಥವು. ಯಾತ್ರೆ, ಉತ್ಸವ, ಪಲ್ಯ, ಗೊಜ್ಜುಗಳ ಸುತ್ತಲೇ ಗಿರಕಿಹೊಡೆಯುತ್ತಿದ್ದವು. ಕೆಲವೊಮ್ಮೆ ಸುಧಾ ಅಥವಾ ತರಂಗದಂತಹ ಪತ್ರಿಕೆಗಳು ಸಾಂದರ್ಭಿಕವಾಗಿ ಒಂದಿಷ್ಟು ಗಹನ ವಿಷಯಗಳ ಬಗ್ಗೆ ಬರೆದರೂ ಅದೂ ಕೂಡ ಪತ್ರೊಡೆ ಮಾಡುವುದು ಹೇಗೆ ಎಂಬ ಬರಹಗಳ ಶೈಲಿಯಲ್ಲೇ ಇರುತ್ತಿದ್ದವು. ಹಾಗಾಗಿ ಕನ್ನಡದಲ್ಲಿ ರಾಜಕೀಯದ ಬಗ್ಗೆ, ಸಮಕಾಲೀನ ಆಗು-ಹೋಗುಗಳ ಬಗ್ಗೆ ಬರೆಯುವುದು ಸಾಧ್ಯವೇ ಇಲ್ಲವೇನೋ (ವಿಜ್ಞಾನದ ಗಹನ ವಿಷಯಗಳನ್ನು ಕನ್ನಡದಲ್ಲಿ ಹೇಳುವುದು ಕಷ್ಟ ಎಂಬಂತೆ)ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದೆ ನಾನು. ಆದರೆ, ನೀವು ಹೇಳಿದ್ದು ಕೇಳಿ ಈಗ ಆ ಪತ್ರಿಕೆಯನ್ನು ಓದಲೇಬೇಕು ಎನಿಸಿದೆ. ಈ ಹಿಂದೆ ಇತ್ತೀಚೆಗೆ ಆ ಪತ್ರಿಕೆಯನ್ನು ಬಸ್- ರೈಲ್ವೆ ನಿಲ್ದಾಣದಲ್ಲಿ ಕೆಲವರು ಓದುತ್ತಿದ್ದುದನ್ನು ನೋಡಿದ್ದೆ. ಆದರೆ, ನಿಮ್ಮಂತೆಯೇ ನಾನೂ ಗೃಹಶೋಭಾ ತರಹದ ಪತ್ರಿಕೆ ಇರಬೇಕು ಎಂದುಕೊಂಡು ಸುಮ್ಮನಾಗಿದ್ದೆ! ಒಕೆ, ಓದಿ ನೋಡ್ತೀನಿ... ಥ್ಯಾಂಕ್ಯೂ!

Anonymous said...

ಧನ್ಯವಾದಗಳು ಅರವಿನ ಅವ್ರೇ..

ನೀವು ನಿಯತಕಾಲಿಕಗಳಲ್ಲಿ ವಿಶೇಷ ಎಂದು ಗಮನಿಸಿದ್ದರ ಕುರಿತು ತಿಳಿಸುತ್ತಿರಿ. ಒಂದು ಆರೋಗ್ಯಕರ ಚರ್ಚೆ ಮಾಡೋಣ..

Unknown said...

ನಿಜ ಹೇಳ ಬೇಕೆಂದರೆ ಹೊಳೀತಾ ಇದ್ದ ಮುಖ ಪುಟ ನೋಡಿ ನಾನು ಮೊದ್ಲಿಗೆ ಸಂಡೇ ಇಂಡಿಯನ್ ತೆಗೊಂಡಿದ್ದು. ಅಂಥಾ ವಿಶೇಷ ಆಸಕ್ತಿ ಏನೂ ನಂಗಿರಲಿಲ್ಲ. ಮತ್ತೆ ಹೆಸರು ನೋಡಿದೆ 'ದ ಸಂಡೇ ಇಂಡಿಯನ್'ಅಂಥ ಇತ್ತು, ಅರೆ ವಿಶೇಷವಾಗಿದೆಯಲ್ಲಾ, ನೋಡೇ ಬಿಡೊಣ ಏನಿದ್ದರೂ ಬಸ್ನಲ್ಲಿ ಅಷ್ಟು ದೂರ ಒಬ್ಳೇ ಹೋಗಬೇಕು, ಜೊತೆಗೆ ಬೇರೆ ಯಾರೂ ಇಲ್ಲ, ಬರೀ ಹತ್ತು ರೂಪಾಯಿ ತಾನೆ ಅಂಥ ತೆಗೊಂಡು ಬಿಟ್ಟೆ, ಜೊತೆಗೊಂದಿಷ್ಟು ಕುರುಕುರೆ, ಚಿಪ್ಸ್... (ಇನ್ನೊಂದು ವಿಷ್ಯಾ ಅಂದ್ರೆ ನಾನು ಆ ಅಂಗಡಿಗೆ ಹೋಗಿದ್ದೇ ಏನಾದ್ರೂ ಕುರುಕಲು ತಿಂಡಿ ತೆಗೊಳ್ಳೋಣಾ ಅಂಥ!) ಸರಿ ಅಂಥ ಬಸ್ಸಲ್ಲಿ ಕೂತೆ, ಒಂದು ಕೈಯಲ್ಲಿ ಚಿಪ್ಸ್ ಪ್ಯಾಕೇಟ್ ಇನ್ನೊಂದರಲ್ಲಿ ಸಂಡೇ ಇಂಡಿಯನ್... ಕೆಲವು ನಿಮಿಷ ಕಳೀತು; ಅರೆರೆ.. ಧಾರಾವಾಹಿ ಇಲ್ಲ! ಹೊಸರುಚಿ ಇಲ್ಲ! ಹರಟೆ-ಗೋಳು-ಪುರಾಣ ಇಲ್ಲ ಯಾರನ್ನೋ ಪುಟಗಟ್ಟಲೆ ಹೊಗಳಿ ಅಟ್ಟಕ್ಕೇರಿಸಿಲ್ಲ! ಗಂಭೀರ ಭಾಷೆ, ಅರ್ಥ ಪೂರ್ಣ ವಿವರಣೆ, ಯಾವ ಕಡೆಗೂ ವಾಲದ ಸಮತೋಲಿತ ಬರಹಗಳು! ಆದರೆ ಒಂದು ವಿಷಯ,ಎಲ್ಲವನ್ನೂ ಕನ್ನಡದಲ್ಲೇ ಕಟ್ಟಿ ಕೊಡುತ್ತಿರುವ ಪತ್ರಿಕೆಗೆ ಇಂಗ್ಲಿಷ್ ಹೆಸರೇ ಬೇಕಿತ್ತೇ, ಕನ್ನಡದಲ್ಲೇನು ಹೆಸರಿಗೆ ಬರಬಂದಿತ್ತೇ? ಯಾಕೋ ಕನ್ನಡ ಲೋಕಕ್ಕೆ ಆ ಹೆಸರು ಸೂಕ್ತ ಎಂದೆನಿಸುತ್ತಿಲ್ಲ...

Archana said...
This comment has been removed by the author.
Archana said...

ಚರ್ಚೆಯಲ್ಲಿ ಪಾಲ್ಗೊಂಡ ವಿದ್ಯಾಗೆ ವೆಲ್ ಕಮ್..
ಹೌದು.. ನೀವಂದದ್ದು ಸತ್ಯ. ನನಗೂ 'ದ ಸಂಡೆ ಇಂಡಿಯನ್' ಹೆಸರು ಯಾಕೋ ಸರಿ ಕಂಡಿಲ್ಲ. ಕನ್ನಡದಲ್ಲಿ ಹೆಸರಿಗೆ ಬರವಿತ್ತೇ? good question raised by u..

Unknown said...

ಅಲ್ಲಾ.. ನೀವೆಲ್ಲಾ ಹೆಸರಿನ ಬಗ್ಗೆ ಇಷ್ಟು ತಲೆ ಕೆಡಿಸಿಕೊಂಡಿದ್ದು ಯಾಕೆ ಅಂತ ತಿಳೀತಾ ಇಲ್ಲ. ರವಿ ಬೆಳಗೆರೆ ಅಪ್ಪಟ ಕನ್ನಡದಲ್ಲಿ 'ಹಾಯ್ ಬೆಂಗಳೂರು' ಅಂತ ತಮ್ಮ ಪತ್ರಿಕೆಗೆ ಹೆಸರಿಟ್ಟಿಲ್ವಾ? 'ದ್ಯಾಟ್ಸ್ ಕನ್ನಡ' ಅಂತ ಕಂಗ್ಲಿಷ್ ಹೆಸರಿನ ವೆಬ್ ಸೈಟ್ ಇಲ್ವಾ? ಪತ್ರಿಕೆ ಕೊಡುವ ಮಾಹಿತಿ, ಅದರೊಳಗಿನ ಹೂರಣ ಮುಖ್ಯವೇ ಹೊರತು ಹೆಸರಲ್ಲ.

v.v. said...

Archana,

I just read your first post.(After reading the later ones.)

You have written:

"ಕನ್ನಡ ನಿಯತ ಕಾಲಿಕಗಳ ಕುರಿತು ಚರ್ಚಿಸಲು ಒಂದು ವೇದಿಕೆ ಯಾಕೆ ಆರಂಭಿಸಬಾರದು ಎಂಬ ಪ್ರಶ್ನೆ ತಕ್ಷಣ ಮನದಲ್ಲಿ ಬಂತು. ಅದರ ಫಲವೇ ಈ ಬ್ಲಾಗ್."

As a person who is greatly interested in newspapers and news magazines, I would be looking forward to your blog posts.

ಹೆಸರು ರಾಜೇಶ್, said...

Ethichege Namma vyakthigata Hagu Sarvajanika charchegalannu Nammade Ada Khasagi Jagathinalli Charchisuva Anivaryate Huttikondide. e Blogina Mukhantara Nanu namma Abhiprayagalannu Hagu Bhavanegalannu Hanchikollona. Blogina Lokakke Teredukonda Nimage Dhanyavadagalu.
geleya
rajesh